ಆನೇಕಲ್ ಸುದ್ದಿ

ಆನೇಕಲ್‌ನಲ್ಲಿ ಡಿ.2 ರಂದು ಉದ್ಯೋಗ ಮೇಳ- 200 ಕಂಪನಿಗಳು ಭಾಗಿ

ಆನೇಕಲ್ 25:  ತಾಲ್ಲೂಕಿನ ನಿರೂದ್ಯೋಗಿಗಳಿಗೆ ಸಹಾಯವಾಗಲೆಂದು ಡಿಸೆಂಬರ್ 2 ರಂದು ಆನೇಕಲ್‌ನ ಸರ್ಜಾಪುರದಲ್ಲಿ ಬೃಹತ್ ಉದ್ಯೋಗ ಮೇಳವನ್ನ ನಡೆಸಲಾಗುತ್ತಿದೆ. ಆನೇಕಲ್ ಶಾಸಕ ಬಿ.ಶಿವಣ್ಣ ನೇತೃತ್ವದಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ದಿ ಮತ್ತು ವೃತ್ತಿ ನಿಗಮದ ವತಿಯಿಂದ ಉದ್ಯೋಗ ಮೇಳವನ್ನ ನಡೆಸಲಾಗುತ್ತಿದ್ದು ಸುಮಾರು 200 ಕ್ಕೂ ಹೆಚ್ಚು ಕೈಗಾರಿಕೆಗಳು ಹಾಗೂ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದೆ. ಈ ಬಗ್ಗೆ ಇಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಆನೇಕಲ್ ಶಾಸಕ ಬಿ.ಶಿವಣ್ಣ ಆನೇಕಲ್‌ನ ಮೇಳದಲ್ಲಿ ೨೦೦ ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಲಿದ್ದು 7ನೇ ತರಗತಿ ಯಿಂದ 10 ನೇ ತರಗತಿ ಓದಿರುವವರು ಸಹ ಮೇಳದಲ್ಲಿ ಭಾಗವಹಿಸಬಹುದಾಗಿದೆ.ಸುಮಾರು 200 ಕ್ಕೂ ಹೆಚ್ಚು ಕೈಗಾರಿಕೆಗಳು ಹಾಗೂ ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದೆ.

ಇನ್ನೂ ಬಿ.ಎ , ಬಿಕಾಂ, ಬಿಬಿಎಂ , ಎಂ.ಎ, ಎಂ.ಕಾಂ , ಬಿಇ, ಎಂ.ಇ, ಎಂ,ಟೆಕ್ ಮಾಡಿರುವ ಎಲ್ಲರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹದಾಗಿದೆ. ಸರ್ಜಾಪುರದ ಸರ್ದಾರ್ ವಲ್ಲಭಬಾಯ್ ಪಟೇಲ್ ಮೈದಾನದಲ್ಲಿ ಉದ್ಯೋಗ ಮೇಳವನ್ನ ಡಿಸೆಂಬರ್ ೨ ಎಂದು ಆಯೋಜಿಸಲಾಗಿದ್ದು ಬೆಳ್ಳಗೆ 9 ರಿಂದ ಸಂಜೆ 5 ಗಂಟೆವರೆಗೂ ಮೇಳ ನಡೆಯಲಿದೆ, ಇನ್ನೂ ಅಕೌಂಟ್ಸ್, ಫೆನಾನ್ಸ್, ಮಾರ್ಕೆಟಿಂಗ್  ಹಾಗೂ ಬ್ಯಾಕಿಂಗ್ ಮುಂತಾದ ಪರಿಣಿತ ಕ್ಷೇತ್ರದಲ್ಲೂ ವಿಶೇಷ ಉದ್ಯೋಗವಕಾಶ ಕಲ್ಪಿಸಲಾಗಿದೆ. ಕ್ಷೇತ್ರದ ಎಲ್ಲರೂ ಈ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗಪಡಿಸಿಕೊಳ್ಳಬೆಕೆಂದು ಶಾಸಕರು ಮನವಿ ಮಾಡಿದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಯುವಕರು ತಮ್ಮ ಬಯೋ ಡಾಟಾದ ೧೦ ಕಾಪಿ ಜೆರಾಕ್ಸ್ ಹಾಗೂ ಮಾರ್ಕ್ಸ್ ಕಾರ್ಡ್‌ಗಳನ್ನ ಖಡ್ಡಾಯವಾಗಿ ತರಬೇಕಾಗಿರುವುದು. 50 ವರ್ಷ ಮೆಲ್ಪಟ್ಟವರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶವಿದೆ. ಅಂತಿಮ ವರ್ಷದ ಪದವಿಧರರು ಸಹ ಮೇಳದಲ್ಲಿ ಪಾಲ್ಗೋಳ್ಳಬಹುದು. ಆಯ್ಕೆಯಾದವರಿಗೆ ಸ್ಥಳದಲ್ಲಿ ನೇಮಕಾತಿ ಪತ್ರ ಸಹ ನೀಡಲಾಗುವುದು. ಎಂದು ಶಾಸಕ ಬಿ.ಶಿವಣ್ಣ ಇದೇ ವೇಳೆ ತಿಳಿಸಿದರು.

Leave a Reply

Your email address will not be published. Required fields are marked *