ಪ್ರಚಲಿತ ವಿದ್ಯಮಾನ

ಅಯೋಧ್ಯ : ಸುಪ್ರೀಂ ತೀರ್ಪು ಸ್ವಾಗತಾರ್ಹ, ಕೇಂದ್ರ ಸಚಿವ ಪಿ.ಬಿ ಚೌದರಿ

ಹೆಚ್.ಎಸ್.ಆರ್ ಬಡಾವಣೆ: ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಪರಸ್ಪರ ಹೊಂದಾಣಿಗೆ ಮೂಲಕ ಸಮಸ್ಯೆಯನ್ನ ಇತ್ಯರ್ಥಪಡಿಸಿಕೊಳ್ಳುವಂತೆ ಇಂದು ಸುಪ್ರೀಂ ಕೊರ್ಟ್ ಮಹತ್ವದ ಆದೇಶ ನೀಡಿರುವುದು ಸ್ವಾಗತಾರ್ಹ ಎಂದು ಕೇಂದ್ರ ಕಾನೂನು ವ್ಯವಹಾರಗಳ ರಾಜ್ಯ ಸಚಿವ ಪಿ.ಬಿ ಚೌದರಿ ತಿಳಿಸಿದ್ದಾರೆ. ಬೆಂಗಳೂರಿನ ಹೆಚ್.ಎಸ್.ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಆಯಿ ಮಾತಾ ದೇವರ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಾಬ್ರಿ ಮಸಿದಿ ದ್ವಂಸ ವಿಚಾರದಲ್ಲಿ ಯಾರ ಪರ ಹಾಗೂ ವಿರುದ್ದವಾಗಿ ತೀರ್ಪು ಬಂದಿಲ್ಲ ಹಾಗಾಗಿ ಇಲ್ಲಿ ಯಾವುದೇ ತಾರತಮ್ಯದ ವಿಚಾರವೇ ಉದ್ಭವಾಗುವುದಿಲ್ಲ ಎಂದು ಅವರು ತಿಳಿಸಿದರು.

ಇದೇ ವೇಳೆ ರಫೇಲ್ ವಿಚಾರದಲ್ಲಿ ರಾಹುಲ್ ಗಾಂಧಿ ಯಾವುದೇ ದಾಖಲೆ ಇಲ್ಲದೇ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವ ಆರೋಪದಲ್ಲಿ ಸತ್ಯವಿಲ್ಲ ಎಂದು ತಿಳಿಸಿದರು. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮೋದಿ ದೇಶದ ಪ್ರಧಾನಿಯಾಗುವುದು ಖಚಿತ ಇದನ್ನ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಚಿವ ಪಿ.ಬಿ ಚೌದರಿ ತಿಳಿಸಿದರು

Leave a Reply

Your email address will not be published. Required fields are marked *