ಆನೇಕಲ್ ಸುದ್ದಿ

ಅತ್ತಿಬೆಲೆಯಲ್ಲಿ ಸ್ವಚ್ಚ ಸರ್ವೆಕ್ಷಣ ೨೦೧೮ ಕ್ಕೆ ಚಾಲನೆ, ಜಾಗೃತಿ ಜಾಥ

ಅತ್ತಿಬೆಲೆ : ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸ್ವಚ್ಚ ಸರ್ವೇಕ್ಷಣ ೨೦೧೮ ಕಾರ್ಯಕ್ರಮಕ್ಕೆ ಇಂದು ಆನೇಕಲ್‌ನ ಅತ್ತಿಬೆಲೆ ಪುರಸಭೆಯಲ್ಲಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ರಾಯಬಾರಿ ಶುಭಪುಂಜ ಹಾಗೂ ಅತ್ತಿಬೆಲೆ ಸಿಪಿಐ ರಾಜೇಶ್ ಸೇರಿದಂತೆ ಪುರಸಭಾ ಸದಸ್ಯರುಗಳು ಈ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು. ಅಲ್ಲದೇ ನೂರಾರು ವಿದ್ಯಾರ್ಥಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥ ಸಹ ಹಮ್ಮಿಕೊಳ್ಳಲಾಗಿದೆ. ಕಸವನ್ನ ಎಲ್ಲೆಂದರಲ್ಲಿ ಎಸೆಯದಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಲಾಯಿತು. ಅಲ್ಲದೇ ಕಸವನ್ನ ಹಸಿ ಹಾಗೂ ಒಣ ಕಸವನ್ನಾಗಿ ಪ್ರತ್ಯೆಕ ಮಾಡಿ ಕಸದ ಗಾಡಿಗಳಿಗೆ ಹಾಕುವಂತೆ ಜನರಿಗೆ ಮನವಿ ಮಾಡಲಾಯಿತು. ಹಾಗೂ ಪ್ಲಾಸ್ಟಿಕ್ ವಸ್ತಗಳು ಆದಷ್ಟೂ ಕಡಿಮೆ ಬಳಸಬೇಕೆಂದು ಜನರಿಗೆ ತಿಳಿ ಹೇಳಲಾಯಿತು. ನೀರಿನ ಕಡಿಮೆ ಬಳಕೆ, ಚರಂಡಿ ಸ್ವಚ್ಚತೆ, ಪ್ರತಿ ಮನೆಯಲ್ಲೂ ಶೌಚಾಲಯ ಹೀಗೆ ವಿದ್ಯಾರ್ಥಿಗಳ ಜೊತೆ ಜಾಗೃತಿ ಜಾಥ ನಡೆಸಿ ಸಾರ್ವಜನಿಕರಿಗೆ ಸ್ವಚ್ಚಭಾರತ್ ಕಾರ್ಯಕ್ರಮಕ್ಕೆ ತಮ್ಮ ಕೈ ಜೋಡಿಸುವಂತೆ ಮನವಿ ಮಾಡಲಾಯಿತು, ಪೊಲೀಸ್ ಅಧಿಕಾರಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಇನ್ನಷ್ಟು ಮೆರುಗು ನಿಡಿದರು.

 

Leave a Reply

Your email address will not be published. Required fields are marked *