ಪ್ರಚಲಿತ ವಿದ್ಯಮಾನ

ಅಂತರ್ ರಾಷ್ಟ್ರೀಯ ಮಹಿಳಾ ದಿನ, ನ್ಯಾಯಾಧೀಶರಿಂದ ಮಹಿಳೆಯರಿಗೆ ಕಾನೂನು ಅರಿವು.

 

ಆನೇಕಲ್:  ಅಂತರ್ ರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಿಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆನೇಕಲ್ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರು ಸೇರಿದಂತೆ ಹಲವರು ಮಹಿಳೆಯರ ಹಕ್ಕುಗಳ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು, ಮಹಿಳೆಯರಿಗೆ ವಿಶೇಷವಾಗಿ ನ್ಯಾಯಾಧೀಶರು ಹಾಗೂ ವಕೀಲರು ಕಾನೂನಿನ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಅವರು ಹಕ್ಕುಗಳ ಬಗ್ಗೆ ವಿವರವಾಗಿ ಅರಿವು ಮೂಡಿಸಲಾಯಿತು.

 

ಅದರಲ್ಲೂ ಪ್ರಮುಖವಾಗಿ ಆಸ್ತಿಯ ಹಕ್ಕು, ಜೀವನಾಂಶದ ಹಕ್ಕು, ಭ್ರೂಣ ಹತ್ಯೆ ತಡೆ, ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸಲಾಯಿತು. ಜೊತೆಗೆ ಅವರ ಮನಸ್ಸಿನಲ್ಲಿದ್ದ ಎಲ್ಲಾ ಗೊಂದಲಗಳ ಬಗ್ಗೆ ವಕೀಲರು ಹಾಗೂ ನ್ಯಾಯಾಧೀಶರು ಮಾರ್ಗದರ್ಶನ ಮಾಡಿ ಪರಿಹಾರ ಮಾರ್ಗಗಳನ್ನ ಸಹ ಸೂಚಿಸಿದರು. ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು ಸಹ ಕಾನೂನಿನ ಅರಿವು ಪಡೆದುಕೊಳ್ಳುವ ಮೂಲಕ ಮಹಿಳಾ ಹಕ್ಕುಗಳ ಬಗ್ಗೆ ಮಾಹಿತಿ ಪಡೆದು ವಿಶೇಷವಾಗಿ ಮಹಿಳಾ ದಿನವನ್ನ ಆಚರಿಸಿದರು.

Leave a Reply

Your email address will not be published. Required fields are marked *