ಪ್ರಚಲಿತ ವಿದ್ಯಮಾನ

ಆನೇಕಲ್ ಶಶಿ ರವರ ಜನ ಗಣ ಮನ ಚಿತ್ರ

ಆನೇಕಲ್ ನಲ್ಲಿ ಓದಿ ಬೆಳೆದು ಸುಮಾರು 15 ವರ್ಷಗಳಿಂದ ಸಿನಿಮಾ ರಂಗದಲ್ಲಿ ದುಡಿದು ತುOಬ ಕೆಳಮಟ್ಟದಿಂದ ಬಂದಂತಹ ￰ಯುವಕ ಶಶಿ ರವರು ತನ್ನ ಚಿತ್ರ ರಂಗದ ಸಂಪೂರ್ಣ ಅನುಭವವನ್ನು ಜನ ಗಣ ಮನ ಕನ್ನಡ ಚಿತ್ರಕ್ಕೆ ದಾರೆ ಎಳೆದು ಕಡಿಮೆ ಬಜೆಟ್ನಲ್ಲಿ ಕನ್ನಡ ಚಿತ್ರ ನಿರ್ಮಾಣ￰ ಮಾಡಿ ಕನ್ನಡಿಗರ ಮನಗೆದ್ದ ಆನೇಕಲ್ ಶಶಿ ರವರಿಗೆ ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಗೆಲುವು ಸಿಗಲಿ ಎಂದು ಹಾರೈಸುತ್ತೇವೆ

ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಮತ ಜಾಗೃತ ಅಭಿಯಾನ ಹಾಗು ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಅಭಿಯಾನ

ಜಯಕರ್ನಾಟಕ ಆನೇಕಲ್ ತಾಲ್ಲೂಕು ಯೂತ್ ಅಧ್ಯಕ್ಷರಾದ ಸುರೇಶ್ ಬಾಬು ರವರ ನೇತೃತ್ವದಲ್ಲಿ ಸಂಘಟನೆ ಬಲಬಡಿಸುವುದು ಮತ್ತು ಹೊಸ ಕಾರ್ಯಕರ್ತರ ಸೇರ್ಪಡೆ ಹಾಗು ಆನೇಕಲ್ ತಾಲ್ಲೂಕಿನಾದ್ಯಂತ 1000 ಬೈಕ್ ರಾಲಿ ಯನ್ನು ಮತ ಜಾಗೃತ ಅಭಿಯಾನ ಹಾಗು ನೀರಿನ ಮಿತ ಬಳಕೆ ಬಗ್ಗೆ ಜಾಗೃತಿ ಅಭಿಯಾನ ವನ್ನು ಮಾಡುವ ಉದ್ದೇಶದಿಂದ ಇಂದು ಪೂರ್ವಭಾವಿ ಸಭೆಯನ್ನು ಆನೇಕಲ್ ಟೌನ್ ನ ಬಸವೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು ಭಾಗವಹಿಸಿದವರು ತಾಲ್ಲೂಕು ಯೂತ್ ಉಪಾಧಯಾಕ್ಷರು ರಮೇಶ್ , ಸುನೀಲ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ […]

ನನ್ನ ಕಥೆ ಸಾಮಾನ್ಯ ಸುದ್ದಿ ಸಿನಿಮಾ ಜಗತ್ತು

ವಿಜ್ಞಾನಿ ಆಗಬೇಕಿದ್ದ ಕಾಶಿನಾಥ್ ನಟ-ನಿರ್ದೇಶಕರಾದ್ರು

ಏನ್ ಸಾರ್, ನಿಮ್ಗೆ ಅರುಳು ಮರುಳಾ? – ಅಂತ ನೇರವಾಗಿ ಕೇಳಿದ್ದೆ! ಬೇರೆ ಯಾರೇ ಆಗಿದ್ದರೆ ನಾಲ್ಕು ತದಕಿಬಿಡುತ್ತಿದ್ದರೋ ಏನೋ? ಆದರೆ ಕಾಶೀನಾಥ್ ಹಾಗೆ ಮಾಡಲಿಲ್ಲ. ಬದಲು ಜೋರಾಗಿ ನಕ್ಕು ಬಿಟ್ಟಿದ್ದರು! ಕಾಶಿನಾಥ್ ಇರುವುದೇ ಹಾಗೆ. ನಗಬೇಕಾದಲ್ಲಿ ಸಿಟ್ಟು ಮಾಡಿಕೊಳ್ಳುತ್ತಾರೆ, ಸಿಟ್ಟು ಮಾಡಿಕೊಳ್ಳಬೇಕಾದಲ್ಲಿ ನಗುತ್ತಾರೆ! ನಾನು ಕೇಳಿದ ಪ್ರಶ್ನೆಯ ಉದ್ದೇಶ ನಿಮಗೆ ಗೊತ್ತಾದರೆ, ನೀವು ಕೂಡ ಕಾಶಿನಾಥ್​ಗೆ ಇದೇ ಪ್ರಶ್ನೆಯನ್ನು ಕೇಳಿರುತ್ತಿದ್ದೀರಿ! ಕಾರಣ; ಅವರು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ರಕ್ಕಾಗಿ ಕಾಯುತ್ತ ಮನೆಯಲ್ಲಿ ಕೂತಿದ್ದರು! […]

ಪ್ರಚಲಿತ ವಿದ್ಯಮಾನ ಸಾಮಾನ್ಯ ಸುದ್ದಿ

ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಹೃದಯಾಘಾತದಿಂದ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಇಂದು ಸಂಜೆ ಚಾಮರಾಜಪೇಟೆ ಹಿಂದೂ ರುದ್ರಭೂಮಿಯಲ್ಲಿ ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು, ಕಾಶಿನಾಥ್ ಅವರ ಪುತ್ರ ಅಭಿಮನ್ಯು ಅವರು ಸಂಪ್ರದಾಯದಂತೆ ಅಂತಿಮ ವಿಧಿ, ವಿಧಾನ ನೆರವೇರಿಸಿದ ಬಳಿಕ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂತ್ಯಸಂಸ್ಕಾರದಲ್ಲಿ ಕಾಶಿನಾಥ್ ಅವರ ಕುಟುಂಬ ಹಾಗೂ ಸ್ಯಾಂಡಲ್ ವುಡ್ ನ ಹಲವು ನಟರು ಸೇರಿದಂತೆ ಸಾವಿರಾರು ಗಣ್ಯರು ಭಾಗವಹಿಸಿದ್ದರು. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ […]

ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಜಿಗಣಿ- ಕನಿಷ್ಟ ವೇತನ, ವರ್ಗಾವಣೆ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ

ಆನೇಕಲ್ 19- ಆನೇಕಲ್ ನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ಬಿಲ್ ಪೊರ್ಜ್ ಕಾರ್ಖಾನೆ ವಿರುದ್ದ ಇಲ್ಲಿನ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಕಾರಣ ಇಲ್ಲಿನ ಮ್ಯಾನೇಜ್‌ಮೆಂಟ್‌ನ ಕಾರ್ಮಿಕ ವಿರೋಧಿ ದೋರಣೆ.. ಹೌದು ಸುಮಾರು ೧೦ ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೂ ಸಂಬಳ ಹೆಚ್ಚು ಮಾಡದೇ ದುಡಿಸಿಕೊಳ್ಳುತ್ತಿರುವ ಕಂಪನಿ ಈ ಬಗ್ಗೆ ದ್ವನಿ ಎತ್ತುವ ಕಾರ್ಮಿಕರನ್ನ ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡುವ ಮೂಲಕ ಸರ್ವಾಧಿಕಾರಿಯಾಗಿ ವರ್ತನೆ ಮಾಡುತ್ತಿದೆ. ಹೀಗಾಗಿ ಇಂದು ಸುಮಾರು ೩೦೦ ಕ್ಕೂ ಹೆಚ್ಚು ಕಾರ್ಮಿಕರು […]

ಪ್ರಚಲಿತ ವಿದ್ಯಮಾನ

ಆನೇಕಲ್; ಎರಡು ಬೈಕ್ ಡಿಕ್ಕಿ, ಒಬ್ಬ ಸಾವು ಮೂವರಿಗೆ ಗಾಯ

ಆನೇಕಲ್ ೧೫; ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ, ಆನೇಕಲ್ ಅತ್ತಿಬೆಲೆ ರಸ್ತೆಯ ಬೆಸ್ತಮಾನಹಳ್ಳಿ ಬಳಿ ಇಂದು ಸಂಜೆ ಸುಮಾರು 7;30ರ ಸುಮಾರಿಗೆ 2 ಬೈಕ್’ಗಳು ಮುಖಾಮುಖಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ತಾಲೂಕಿನ ಆದೂರು ಗ್ರಾಮದ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು ಬೆಸ್ತಮಾನ ಹಳ್ಳಿಯ ಅರುಣ್ ಶೆಟ್ಟಹಳ್ಳಿ ಗ್ರಾಮದ ಮುರಳಿ ಸೇರಿದಂತೆ ಮೂವರು ಗಂಭೀರ […]

ಆನೇಕಲ್ ಸುದ್ದಿ

ಬಿಜೆಪಿ ಮುಖಂಡರ ಆರೋಪಗಳಲ್ಲಿ ಉರುಳಿಲ್ಲ; ಶಾಸಕ ಶಿವಣ್ಣ

ಆನೇಕಲ್ ೧೫ ; ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳನ್ನ ಸಹಿಸಲಾಗದೇ ತಾಲ್ಲೂಕು ಬಿಜೆಪಿ ಮುಖಂಡರು ಅಸಂಬದ್ದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆನೇಕಲ್ ಶಾಸಕ ಬಿ.ಶಿವಣ್ಣ ಹೇಳಿದ್ದಾರೆ. ಆನೇಕಲ್ ಮುತ್ತನಲ್ಲೂರು ಗ್ರಾಮದಲ್ಲಿ ಸಾರ್ವಜನಿಕರಿಗೆ ವಿವಿಧ ಯೋಜನೆಗಳ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿರವರು ೧೮ ವರ್ಷಗಳಿಂದ ಮಾಡದ ಅಭಿವೃದ್ದಿ ತಾಲ್ಲೂಕಿನಲ್ಲಿ ಈಗ ಆಗಿದೆ. ಇದರಿಂದ ಬಿಜೆಪಿ ಮುಖಂಡರು ಭ್ರಮನಿರಶನಗೊಂಡು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಮಾತಿಗೆ ಜನ ಸೊಪ್ಪು ಹಾಕುವುದಿಲ್ಲ‌. ಮುಂದಿನ […]

ಪ್ರಚಲಿತ ವಿದ್ಯಮಾನ

ಜಿಗಣಿ; ೧೧ ಜನ ಜೀತದಾಳುಗಳ ರಕ್ಷಣೆ

ಆನೇಕಲ್ ೧೫; ಕಳೆದ ಎರಡು ದಶಕಗಳ ಹಿಂದೆಯೆ ರಾಜ್ಯದಲ್ಲಿ ಜೀತ ಪದ್ದತಿಯನ್ನು ನಿಷೇದಿಸಿದ್ದರೂ ಬೆಂಗಳೂರಿಗೆ ಕೂಗಳತೆ ದೂರದಲ್ಲಿ ಈ ಪದ್ದತಿ ಇನ್ನೂ ಜೀವಂತವಾಗಿರುವುದು ಕಂಡುಬಂದಿದೆ. ಆನೇಕಲ್ ತಾಲ್ಲೂಕಿನ ಜಿಗಣಿ ಹೋಬಳಿಯ ಮಾದಪ್ಪನದೊಡ್ಡಿಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ.‌ ದಿಲೀಪ್ ಎಂಬುವರಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ 24 ವರ್ಷಗಳಿಂದ ಎರಡು ಕುಟುಂಬಗಳು ಜೀತ ಪದ್ದತಿ ನಡೆಸಿಕೊಂಡು ಬರುತ್ತಿವೆ ಎಂದು ಹೇಳಲಾಗಿದೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ರಾಜಪ್ಪ ಭೋವಿ ಕುಟುಂಬದವರು ಜೀತಕ್ಕಾಗಿ ದುಡಿಯುತ್ತಿದ್ದರು, ಇದನ್ನು ತಿಳಿದ ಎನ್ ಜಿ ಓ […]

ಆನೇಕಲ್ ಸುದ್ದಿ ಪ್ರಚಲಿತ ವಿದ್ಯಮಾನ

ಕಾವೇರಿ ಕುಡಿಯುವ ನೀರಿನ ಯೋಜನೆ; ಸಿಎಂ ಸಿದ್ದರಾಮಯ್ಯ ಚಾಲನೆ

ಆನೇಕಲ್09; ಆನೇಕಲ್ ತಾಲ್ಲೂಕಿನ ಜನ ಬಹು ದಿನಗಳಿಂದ ಎದುರು ನೊಡುತ್ತಿದ್ದ ಮಹಾತ್ವಕಾಂಕ್ಷೆಯ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಆನೇಕಲ್ ನ ಎ.ಎಸ್.ಬಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಟಿ.ಬಿ. ಜಯಚಂದ್ರ , ಕೆಜೆ ಜಾರ್ಜ್, ಸಂಸದ ಡಿಕೆ ಸುರೇಶ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದರು. ಆನೇಕಲ್ ಜನ ನೀರಿಗಾಗಿ ಹಾಹಾಕಾರ ಪಡುತ್ತಿದ್ದ ಹಿನ್ನೆಲೆಯಲ್ಲಿ ಸಮಸ್ಯೆಗೆ […]

ಪ್ರಚಲಿತ ವಿದ್ಯಮಾನ

ಕರೆಂಟ್ ಶಾಕ್ – 9 ವರ್ಷದ ಬಾಲಕ ಬಲಿ

ಆನೇಕಲ್ 08: ಮನೆಯ ಮುಂದೆ ಅಟವಾಡುತ್ತಿದ್ದ ವೇಳೆ ವಿದ್ಯುತ್ ಹೈಟೇಕ್ಷನ್ ವೈರ್‌ಗೆ ಕೊಲು ತಗುಲಿದ ೯ ವರ್ಷದ ಬಾಲಕ ಮೃತಪಟ್ಟ ಘಟನೆ ಆನೇಕಲ್ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ನಾಗ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ ..ತ್ರಿಶೂಲ್ ಮೃತಪಟ್ಟ ಬಾಲಕ …ಎಂದಿನಂತೆ ತನ್ನ ಸ್ನೇಹಿತರ ಜತೆ ಅಟವಾಡುತ್ತಿದ್ದ ತ್ರಿಶೂಲ ಮನೆ ಪಕ್ಕದ ಕಾಪೌಂಡ್ ಪಕ್ಕದಲ್ಲಿ ಹೈಟೆಕ್ಷನ್ ವೈರ್ ಹಾದುಹೊಗಿತ್ತು .. ಈ ಹೈಟೇಕ್ಷನ್ ವೈರ್ ಬಾಲಕನ ಕೈಯಲ್ಲಿದ್ದ ಕೋಲು ತಗುಲಿದೆ , ಇದರಿಂದ ಬಾಲಕನಿಗೆ ಶೇಕಡ ೮೦% ಸುಟ್ಟ […]